Music Video

Credits

PERFORMING ARTISTS
Ashwin P Kumar
Ashwin P Kumar
Performer
Rajesh Krishnan
Rajesh Krishnan
Performer
Arundhathi Vasishta
Arundhathi Vasishta
Performer
COMPOSITION & LYRICS
Ashwin P Kumar
Ashwin P Kumar
Songwriter
Pradeep K Sastry
Pradeep K Sastry
Songwriter

Lyrics

ಮೋಡಾದ ಚಪ್ಪರವ ಹಾಸಿ
ಹಸುರು ಬೀಸಣಿಗೆ ಒಂದ್ ತಾಸು ಬೀಸಿ
ಕಾದಿದೆಯೋ ಕಾಡೆಲ್ಲಾ ಮಳೆಗಾಗಿ
ಮಳೆ ಹನಿಯೇ ನೀ ಜೀವ ತರಲು
ಇರುಳಲ್ಲೇ ಅರಳಿದೆ ಈ ಹೊಸ ಬಾಳು
ಬಾ ಕುಂಬಾರ ಬಾ
ಬಾ ಕುಂಬಾರ ಬಾ
ಜಗಕೆಲ್ಲ ನಾನೇ ಕುಂಬಾರ
ತಾಯಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
ಬೇರೆ ಪರಪಂಚ ನಾ ಕಾಣೆ
ಈ ಕಾಡ್ ಬಿಟ್ ಏನ್ ಬೇಡ ನನ್ನಾಣೆ
ಇತ್ಲಾಗ್ ಹೂವು... ಅತ್ಲಾಗೇ ಹಾವು
ನಮ್ಮ್ ಕೈಲೈತಾ ಹೇಳ್ ಹುಟ್ಟು ಸಾವು
ನಮ್ಮ್ ದ್ಯಾವ್ರೆ ಕಾದವ್ನೆ ಈ ಕಾಡ
ಕಿವಿಯಾಗ್ ಪಿಸುಗುಟ್ಟವ್ನೆ ಪ್ರೀತಿ ಹಾಡ
ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ಗ ರಿ ಸ ನಿ ಸ
ಇಂದಾದರು ನೀ ಒಸಿ ಉಳಿಯೇ
ಮಗುವ ನೋಡಾದೆ ಹೋಗೋದು ಸರಿಯೇ
ತಾಯ್ ಹೊಂಟೋದ್ರೇನು ಮರಿ ಸಿವಾನೆ
ತಂದೆಗಿಲ್ವಾ ಕೂಸೇ ನಿನ್ಮೇಲ್ ಕರುಣೆ
ಜಗಕೆಲ್ಲ ನಾನೇ ಕುಂಬಾರ
ತಾಯಾಗುಡಿ ಹಾಂಗ್ ಕಟ್ತೀನಿ ನಮ್ಮ್ ಸೂರ
ಭೂತಾಯಿ ಕೊಟ್ಟೋಳೆ ಈ ಮಣ್ಣು
ನನ್ನ ಮಗು ಮೇಲೂ ಇಟ್ಟವಳೇ ಕಣ್ಣು
ಗ ಗರಿ ಗರಿ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ನಿ ಪ ನಿ ಸ
ಗ ಗರಿ ಗಮ ಗರಿಸ... ರಿಸ ರಿಸ ನಿಸ ನಿ
ಸ ಸನಿ ಸನಿ ಸನಿಪಾ... ನಿ ಮ... ಮ ಪ ಮ ಗ ರಿ ನಿ ಸ
ಅವ್ವ
ಬಿಟ್ಟಿವ್ನಿ ನಿಮ್ಮ್ ತಾವ್ ನಮ್ಮ್ ಜೀವ
ಮಡಿಲಲ್ ಹಾಕೊಂಡು ಮುತ್ತ ಇಕ್ಕವ್ವ
ಜಾಗಕ್ಕೆಲ್ಲ ನೀನೆ ಕುಂಬಾರ... ಕಾಡ ಜಾಗಕ್ಕೆಲ್ಲ ನಿಂದೆ ಸಿಂಗಾರ
Written by: Ashwin P Kumar, Chaaya Art Light, Pradeep K Sastry
instagramSharePathic_arrow_out