Music Video

Featured In

Credits

PERFORMING ARTISTS
Sonu Nigam
Sonu Nigam
Performer
Vidyasri
Vidyasri
Performer
V. Sridhar
V. Sridhar
Lead Vocals
Jayanth Kaykini
Jayanth Kaykini
Performer
COMPOSITION & LYRICS
V. Sridhar
V. Sridhar
Composer
Jayanth Kaykini
Jayanth Kaykini
Songwriter
PRODUCTION & ENGINEERING
Uday Mehata
Uday Mehata
Producer

Lyrics

(ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೇ, ಸೇರಬಲ್ಲೆ ನಿನ್ನನ್ನೇ
ನಾನು ಮಾತ್ರ ಬಲ್ಲೇ ನಿನ್ನನ್ನೇ)
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡೀ ನಿನ್ನಯ ನೆನಪನೇ ನೇಯುವೆ
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ಜೀವಗಳ ಭಾಷೆಯಿದು, ಬೇಕೇ ಅನುವಾದ?
ಭಾವಗಳ ದೋಚುವುದು ಚಂದ ಅಪರಾಧ
ಯಾರಿಗೂ ಹೇಳದ ಮಾಹಿತಿ ನೀಡು
ಖಾತರಿ ಇದ್ದರೂ ಕಾಯಿಸಿ ನೋಡು
ನನ್ನಿಂದ ನನ್ನ ನೀನೇ ಕಾಪಾಡು, ಹೃದಯವೇ
(ಸಂತೆಯಲ್ಲೇ ನಿಂತರೂನು
ಸಂತೆಯಲ್ಲೇ ನಿಂತರೂನು ನೋಡು ನೀನು ನನ್ನನ್ನೇ
ನಾನು ಮಾತ್ರ ಕೇಳುವಂತೆ ಕೂಗು ನೀನು ನನ್ನನ್ನೇ
ಕಣ್ಣ ಕಟ್ಟಿ ಬಿಟ್ಟರೂನು ಈಗ ನಾನು ಕಾಣಬಲ್ಲೆ ನಿನ್ನನ್ನೇ, ಸೇರಬಲ್ಲೆ ನಿನ್ನನ್ನೇ
ನಾನು ಮಾತ್ರ ಬಲ್ಲೆ ನಿನ್ನನ್ನೇ)
ಕಣ್ಣಿನಲೇ ದಾರಿಯಿದೆ ನನ್ನ ಸಲುವಾಗಿ
ಮೆಲ್ಲಗೆ ನೀ ಕೈಯ್ಯ ಹಿಡಿ ಇನ್ನೂ ಬಲವಾಗಿ
ನನ್ನಯ ತೋಳಲಿ ನೀನಿರೆ ಇಂದು
ಸಾವಿಗೂ ಹೇಳುವೆ "ನಾಳೆ ಬಾ" ಎಂದು
ಆಗಲೇಬೇಡ ದೂರ ಎಂದೆಂದೂ, ಹೃದಯವೇ
ಹೃದಯವೇ ಬಯಸಿದೆ ನಿನ್ನನೇ
ತೆರೆಯುತ ಕನಸಿನ ಕಣ್ಣನೇ
ದಿನವಿಡಿ ನಿನ್ನಯ ನೆನಪನೇ ನೇಯುವೆ
ಸೆಳೆತಕೆ ಸೋಲುತ ನಾ ಸನಿಹಕೆ ಕಾಯುವೆ
(ಸಂತೆಯಲ್ಲೇ ನಿಂತರೂನು, ನಿಂತರೂನು, ನಿಂತರೂನು, ನಿಂತರೂನು, ನಿಂತರೂನು)
Written by: Jayanth Kaykini, V. Sridhar
instagramSharePathic_arrow_out