Top Songs By K. J. Yesudas
Similar Songs
Credits
PERFORMING ARTISTS
K. J. Yesudas
Performer
COMPOSITION & LYRICS
Hamsalekha
Composer
Lyrics
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ಒಳ್ಳೆ ದಿನ ಘಳಿಗೆಯ ಕೂಡಿಸಿ, ತೆಂಗು ಬಾಳೆ ಚಪ್ಪರವ ಹಾಕಿಸಿ
ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ
ಸರಿಗಮ ಪದನಿಸ ಊದಿಸಿ ತರತರ ಅಡಿಗೆಯ ಮಾಡಿಸಿ
ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೇ ಮದುವೆಯೆ
ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೇ ಬೇಕಂತೆ ತಾಳಿಗೆ
ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ
ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ
ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ
ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೇ
ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ
ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ
ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೇ
ಮಾಂಗಲ್ಯದಿಂದ ನಂಟಾದರು
ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು
ನಮ್ಮೂರ ಯುವರಾಣಿ
ಕಲ್ಯಾಣವಂತೆ
ವರನ್ಯಾರು ಗೊತ್ತೇನೆ ಓ ಕೋಗಿಲೆ
ಶುಭಕೋರಿ ಹಾಡೋಣ ಬಾ ಕೋಗಿಲೆ
Writer(s): Hamsalekha
Lyrics powered by www.musixmatch.com